International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 6 Issue 6 November-December 2024 Submit your research before last 3 days of December to publish your research paper in the issue of November-December.

ವಚನ ಪ್ರತಿಭೆ: ಬೌದ್ಧಿಕ ಪ್ರತಿಭಟನೆಯ ನಿಲುವುಗಳು (Vachana Pratibhe: Bouddhika Pratibhataneya Niluvugalu

Author(s) Dr. S.M. Gangadharaiah
Country India
Abstract ಇಂದು ವಚನಾಧ್ಯಯನದ ಮೂಲತತ್ವಗಳನ್ನು ಅಧ್ಯಯನಿಸುವ ಸಂದರ್ಭದಲ್ಲಿ ವಚನಗಳ ಹುಟ್ಟಿನ ಸಂದರ್ಭವನ್ನು ಕುರಿತು ತೀವ್ರವಾದ ಚರ್ಚೆಯನ್ನು ಆರಂಭಿಸುವುದೊಳಿತು. ಏಕೆಂದರೆ ವಚನ ಪ್ರತಿಭೆಯ ಸಾರ್ಥಕ್ಯತೆಯು ಅವುಗಳು ಅಭಿವ್ಯಕ್ತಿಸುವ ವೈಚಾರಿಕ ಪ್ರತಿಮೆಗಳಲ್ಲಿ ನಿಂತಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ವಚನವೆನ್ನುವ ಪ್ರಕಾರವೇ ವಿಶಿಷ್ಟವಾದುದು. ಪದ್ಯವೂ ಅಲ್ಲದ ಗದ್ಯವೂ ಅಲ್ಲದ ಅವೆರಡಕ್ಕಿಂತಲೂ ಸರಳವಾದ ಪದ್ಯದ ಲಾಲಿತ್ಯವನ್ನು, ಗದ್ಯದ ಹೃದ್ಯತನವನ್ನು ಹೊಂದಿದ ಅಪರೂಪದ ಸಾಹಿತ್ಯಕ ಪ್ರಕಾರವಾಗಿ ಒದಗಿಬರುತ್ತದೆ. ಅದರ ರಚನೆಗಳಲ್ಲಿ ಸೂತ್ರರೂಪವನ್ನು ಕಾಣುತ್ತೇವೆ. ಪ್ರತಿ ವಚನವು ದರ್ಶನಶಾಸ್ತ್ರದ ಮೂರು ವೈಲಕ್ಷಣಗಳಾದ ಈಶ್ವರ, ಜೀವ, ಜಗತ್ತು ಇವುಗಳನ್ನು ಕುರಿತು ಹೇಳುತ್ತದೆ. ಈ ಮೂರರ ಸಂಬಂಧವನ್ನು ಮೂಲಭೂತವಾಗಿಟ್ಟುಕೊಂಡು ತರ್ಕಬದ್ಧವಾಗಿ ಅನುಭವಸಮ್ಮತವಾಗಿ ಹಿತಮಿತ ಭಾಷೆಯ ಪರಿಧಿಯಲ್ಲಿ ಕಾವ್ಯಮಯವಾಗಿ ಪ್ರತಿಮೆಗಳನ್ನು ರೂಪಿಸುತ್ತಾ ಅಭಿವ್ಯಕ್ತಿಗಳನ್ನು ಪ್ರಕಟಿಸುತ್ತದೆ. ಪರಸ್ಪರ ಸಂಬಂಧವನ್ನು ಹೊಂದಿದ್ದರೂ ಸಂಬಂಧವಿಲ್ಲದಂತೆ ಬಿಡಿಬಿಡಿಯಾದ ಮುಕ್ತಕಗಳಂತೆ ಅಭಿವ್ಯಕ್ತಿಯಾಗುತ್ತವೆ. ಇಂಥ ವಚನಗಳನ್ನು ಮರು ಅಧ್ಯಯನಿಸುವ ಚಿಂತನೆ ಮೇಲಿಂದ ಮೇಲೆ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿ. ವಚನಸಾಹಿತ್ಯವು ಶ್ರೇಷ್ಠ ಸೈದ್ಧಾಂತಿಕ ನಿಲುವನ್ನು ಹೊಂದಿದೆ. ಅದರ ಉದ್ದೇಶ ಕಾವ್ಯಸೃಷ್ಟಿಯಲ್ಲ. ಅದು ಒಂದು ಬೌದ್ಧಿಕ ಚಳುವಳಿ. ಆ ಚಳುವಳಿಯನ್ನು ಕೇವಲ ಭಾಷಿಕ ನೆಲೆಯಲ್ಲಿ ಮಾಡದೆ ವೈಚಾರಿಕ ನೆಲೆಯಲ್ಲಿ ಅದರಲ್ಲೂ ಕೂಡ ಪ್ರತಿಭಟನೆಯ ನೆಲೆಯಲ್ಲಿಯೇ ವಚನ ಸಾಹಿತ್ಯವು ಹುಟ್ಟಿಕೊಂಡಿತು ಎನ್ನುವುದು ಈ ಸಂಶೋಧನಾಲೇಖನದ ಆಶಯ.
Keywords Vachana Literature, Intellectual Freedom, Freedom of Speech, Freedom of Expression in kannada Vachana Literature
Field Sociology > Linguistic / Literature
Published In Volume 6, Issue 5, September-October 2024
Published On 2024-10-23
Cite This ವಚನ ಪ್ರತಿಭೆ: ಬೌದ್ಧಿಕ ಪ್ರತಿಭಟನೆಯ ನಿಲುವುಗಳು (Vachana Pratibhe: Bouddhika Pratibhataneya Niluvugalu - Dr. S.M. Gangadharaiah - IJFMR Volume 6, Issue 5, September-October 2024. DOI 10.36948/ijfmr.2024.v06i05.28390
DOI https://doi.org/10.36948/ijfmr.2024.v06i05.28390
Short DOI https://doi.org/g8pnrg

Share this