International Journal For Multidisciplinary Research

E-ISSN: 2582-2160     Impact Factor: 9.24

A Widely Indexed Open Access Peer Reviewed Multidisciplinary Bi-monthly Scholarly International Journal

Call for Paper Volume 6 Issue 4 July-August 2024 Submit your research before last 3 days of August to publish your research paper in the issue of July-August.

ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣಿ ಭಾಷಾ ನಾಟಕಕಾರ ಚಾ. ಫ್ರಾ. ದೆಕೊಸ್ತಾರವರು ಬರೆದ ಕೊಂಕಣಿ ನಾಟಕಗಳಲ್ಲಿರುವ ಸ್ತ್ರೀಪಾತ್ರಗಳ ಬಗ್ಗೆ ಒಂದು ಅವಲೋಕನ

Author(s) Wilma Fernandes
Country India
Abstract ಕ್ರಾಂತಿಕಾರಿ ನಾಟಕಕಾರ ಎಂದೇ ಪ್ರಸಿದ್ಧರಾಗಿರುವ ಚಾ. ಫ್ರಾ. ದೆಕೊಸ್ತಾರವರು ಕೊಂಕಣಿ ಭಾಷೆಯ ಖ್ಯಾತ ಸಾಹಿತಿ. ಅವರ ಪೂರ್ಣ ಹೆಸರು ಚಾರ್ಲ್ಸ್ ಫ್ರಾನ್ಸಿಸ್ ದೆಕೊಸ್ತಾ. ಅವರನ್ನು ಚಾ. ಫ್ರಾ. ಎಂದು ಕರೆಯಲಾಗುತ್ತಿತ್ತು. ಸಣ್ಣ ವಯಸ್ಸಿನಿಂದಲೇ ಸಾಹಿತ್ಯದ ಮೇಲೆ ಅಭಿರುಚಿ ಇರುವ ಚಾ. ಫ್ರಾ. ೧೯೫೨ ರಲ್ಲಿ ಮೊದಲ ಕವಿತೆ ಬರೆದು ಪ್ರಕಟಿಸಿದರು. ಅವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದಾರೆ. ಮಾತ್ರವಲ್ಲದೆ ಉತ್ತಮ ನಟ, ನಿರ್ದೇಶಕರಾಗಿಯೂ ಕಾರ್ಯ ನಿರ್ವಹಸಿದ್ದಾರೆ. ಚಾ. ಫ್ರಾ. ರವರು ಕೊಂಕಣಿ ರಂಗಮಂಚಕ್ಕೆ ಹೊಸ ರೂಪ ನೀಡಿದರು. ಅವರು ರಚಿಸಿದ ನಾಟಕಗಳು ವಿಭಿನ್ನವಾಗಿದ್ದು ಸಮಾಜದ ಆಗಹೋಗುಗಳ ಪ್ರತಿಬಿಂಬ ಕಂಡ ಅನುಭವ ಪ್ರೇಕ್ಷಕರ ಮನಸ್ಸನಲ್ಲಿ ಮೂಡುತ್ತಿತ್ತು. ಅವರ ನಾಟಕಗಳಲ್ಲಿನ ಸಂಭಾಷಣೆ ತುಂಬಾ ತೀಕ್ಷ್ಣವಾಗಿರುತ್ತಿದ್ದವು. ಯಾವ ಸಂಕೋಚವೂ ಇಲ್ಲದೆ ಸಾಮಾಜಿಕ ಚಿತ್ರಣಗಳನ್ನು ಚಿತ್ರಿಸುತ್ತಿದ್ದರು. ಜನರ ವರ್ತನೆ, ಸಂಭಾಷಣೆ, ದೈನಂದಿನ ಜೀವನ ಇವೆಲ್ಲವನ್ನು ಪ್ರೇಕ್ಷಕರ ಕಣ್ಣ ಮುಂದೆ ಇಟ್ಟಂತೆ ಭಾಸವಾಗುತ್ತಿತ್ತು. ಚಾ. ಫ್ರಾ. ರು ನಾಟಕ ಬರೆಯುವ ಮೊದಲು ಕೊಂಕಣಿ ನಾಟಕಗಳಲ್ಲಿ ಹಲವಾರು ದೃಶ್ಯಗಳಿರುತ್ತಿದ್ದವು. ನಡುನಡುವೆ ಹಾಸ್ಯಗಾರರು ಬಂದು ಹಾಸ್ಯ ಮಾಡಿ ಜನರನ್ನು ನಗಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಚಾ. ಫ್ರಾ. ರ ನಾಟಕಗಳು ರಚನೆಯಾದ ನಂತರ ಕೊಂಕಣೀ ನಾಟಕಗಳ ರೂಪುರೇಖೆಯೇ ಬದಲಾಯಿತು. ಮಿತಿಯಾದ ಪಾತ್ರಗಳು ಹಾಗೂ ದೃಶ್ಯಗಳು ಇರುತ್ತಿದ್ದವು. ಇಡೀ ನಾಟಕವು ಒಂದೇ ವಿಷಯವನ್ನು ತನ್ನ ದೃಷ್ಟಿಕೋನವಾಗಿಸತ್ತಿತ್ತು. ಸಾಮಾನ್ಯವಾಗಿ ನೋಡುವುದಾದರೆ ಹೆಚ್ಚಿನ ಕಥೆ, ಕಾದಂಬರಿ ಹಾಗೂ ನಾಟಕಗಳಲ್ಲಿ ಮಹಿಳೆಯನ್ನು ತುಂಬಾ ಮುಗ್ಧೆಯಾಗಿ, ಅಸಹಾಯಕಿಯಾಗಿ ಹಾಗೂ ಮೃದು ಸ್ವಭಾವದಾಕೆಯಾಗಿ ವರ್ಣಿಸುತ್ತಾರೆ. ಆಕೆ ಎಲ್ಲಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಿ, ತ್ಯಾಗಿಯಾಗಿ ಮನೆಯಲ್ಲಿ ಇರುವ ಪ್ರತಯೊಂದು ಸಮಸ್ಯೆಗಳನ್ನು ಬಗೆಹರಿಸಿ ಇಡೀ ಕುಟುಂಬವನ್ನು ಏಕತೆಯ ದಾರಿಯಲ್ಲಿ ಕರೆದೊಯ್ಯುತ್ತಾಳೆ. ಆದರೆ ಚಾ. ಫ್ರಾ. ರ ನಾಟಕಗಳಲ್ಲಿ ಮಹಿಳೆಯರ ವಿಭಿನ್ನ ಪಾತ್ರಗಳನ್ನು ನಾವು ಕಾಣಬಹುದು. ಈ ಅಧ್ಯಯನದಲ್ಲಿ ನಾನು, ಚಾ. ಫ್ರಾ. ದೆಕೊಸ್ತಾರವರು ಬರೆದ ಕೆಲವು ನಾಟಕಗಳಲ್ಲಿರುವ ಸ್ತ್ರೀಪಾತ್ರಗಳ ಬಗ್ಗೆ ಅವಲೋಕನ ನಡೆಸಲು ಇಚ್ಛಿಸುತ್ತೇನೆ.
Keywords ನಾಟಕ, ವಿಶ್ಲೇಷಣೆ, ಚಾ.ಫ್ರಾ.ದೆಕೊಸ್ತಾ, ಕೊಂಕಣಿ ಭಾಷೆ, ಕ್ರಾಂತಿಕಾರಿ, ಮಹಿಳೆ, ಸ್ತ್ರೀಪಾತ್ರ.
Published In Volume 5, Issue 6, November-December 2023
Published On 2023-12-31
Cite This ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣಿ ಭಾಷಾ ನಾಟಕಕಾರ ಚಾ. ಫ್ರಾ. ದೆಕೊಸ್ತಾರವರು ಬರೆದ ಕೊಂಕಣಿ ನಾಟಕಗಳಲ್ಲಿರುವ ಸ್ತ್ರೀಪಾತ್ರಗಳ ಬಗ್ಗೆ ಒಂದು ಅವಲೋಕನ - Wilma Fernandes - IJFMR Volume 5, Issue 6, November-December 2023. DOI 10.36948/ijfmr.2023.v05i06.11481
DOI https://doi.org/10.36948/ijfmr.2023.v05i06.11481
Short DOI https://doi.org/gtbtcj

Share this